ಕೊರೊನಾ 2ನೇ ಡೋಸ್ ಲಸಿಕೆಗಳಿಗೆ ಏನು ಮಾಡುತ್ತೀರಿ; ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು, ಮೇ 20: ರಾಜ್ಯದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೊದಲನೇ ಡೋಸ್ ಲಸಿಕೆ ಪಡೆದ ನಾಗರಿಕರಿಗೆ ಎರಡನೇ ಡೋಸ್‌ ಲಸಿಕೆಗೆ ಆದ್ಯತೆ ನೀಡಿ ಸೂಕ್ತ ನೀತಿ ನಿಯಮಗಳನ್ನು ರೂಪಿಸಿ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೇ 25ರ ಒಳಗೆ ಈ ಕುರಿತು ರೂಪಿಸಿದ ನೀತಿಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು ಎಂದು ನ್ಯಾಯಮೂರ್ತಿ